ದೊಡ್ಡೇರಿ ಗಿರಿಭಟ್ಟ
ಬಹಳ ದಿವ್ಸದಿಂದ ಕನ್ನಡದಲ್ಲಿ ಬರಿಯಕ್ಕು ಅಂತ ಅನ್ಕಂಡಿದ್ದಿ. ನೊಡನ ಯೆಂತ ಆಗ್ತು ಅಂತ.
ವಿಶಯ ಯೆನಪ್ಪಾ ಅಂದ್ರೆ, ಮೊನ್ನೆ ದೊಡ್ಡೇರಿ ಗಿರಿಭಟ್ಟ ಬಂದಿದ್ದ. ಗಿರಿಭಟ್ಟನ ಬಗ್ಗೆ ಹೇಳಕ್ಕು ಅಂದ್ರೆ 15 ವರ್ಷದ ಹಿಂದಿಂದ ಶುರು ಮಾಡಕ್ಕು. ಅವಂಗೆ ನಮ್ಮೂರು ಅಜ್ಜನ ಮನೆ. ಡೊಡ್ಡೇರಿ ಡಾಕ್ಟ್ರ ಮೊಮ್ಮಗ. ಒಂದ್ ಥರದಲ್ಲಿ ನಮ್ಗೆಲ್ಲಾ ಅವ್ನೇ ಗುರು. ಮೀನು ಹಿಡಿಯದು, ಬಾಳೆಕಾಯಿ ಕದಿಯದು(!), ಕಥೆ ಹೇಳದು.. ಅವ್ನೇ ಯೆಲ್ಲಾ ಕಲ್ಸಿದ್ದು.
ಅಂಥಾ ಗಿರಿ ಈಗ ಹೆಂಗಾಯ್ದ ಅಂದ್ರೆ ವಾವ್ ಅನ್ಸ್ತು. ಅದ್ಭುತವಾಗಿ ಕೊಳಲು ನುಡಿಸದು ಕಲ್ತಿದ್ದ. ಇನ್ನೂ ಚೆನ್ನಾಗಿ ಮಾಜಿಕ್ ಮಾಡದು ಕಲ್ತಿದ್ದ. ನಿಜವಾಗ್ಲೂ ಎಷ್ಟು ಕಲೆಗಾರ ಅವ ಅಂತ ಖುಶಿ ಆಗ್ತು. ಮುಂದಿನ ಸಾರಿ ನಮ್ ರೂಮಿಗೆ ಬಂದಾಗ ಒಂದ್ ಕೊಳಲು ಕಚೇರಿ ಮಾಡಕ್ಕು ಅಂತ ಹೇಳಿದ್ದಿ. ಅದಕ್ಕೆ ಕಾಯ್ತಾ ಇದ್ದಿ.
4 Comments:
ಭಾರಿ ಚೊಲೊ ಆತು ನೋಡು ನೀನು ಕನ್ನಡದಲ್ಲಿ ಬರ್ದಿದ್ದು.
ಇನ್ಮುಂದು ಹಿಂಗೆ ಕನ್ನಡದಲ್ಲೇ ಬರಿತಾ ಇರು.
ಆದೇನೋ ಒನ್ನಮ್ನಿ...
ಕನ್ನಡದಲ್ಲಿ ಬರ್ದಿದ್ ಓದದು ಅಂದ್ರೆ..
ಅದೇ ಬೇರೆ ಕುಶಿನಪ....
ಅದು ಶೀರ್ಷಿಕೆ ನೋಡಲೆ!!
ದೊಡ್ಡೇರಿ ಗಿರಿಭಟ್ಟ
ಗಿರಿಭಟ್ಟನ ಬಗ್ಗೆ ನಾನು ಬಹಳ ಬರ್ಯದಿದ್ದು..
ಅದ್ಯಾವಾಗ್ ಮೂರ್ತ್ ಬತ್ತ.. ಆ ದೇವ್ನೆ ಬಲ್ಲ..
doderi,lingadalli nadalli ella familar names nange. anan amma sagarada badiavalu
i might ahve seen few of them as a kid
ಗಿರಿಮಾಜಿ ಟ್ರಿಲ್ಲರ್ಸ್ ಬಗ್ಗೆ ನಾನೂ ಬರಿಯಂವ ಇದ್ದಿ.. :)
giri manige hogiddi kolalu record maad tagabaindi! Chanaagi baarsta...
Post a Comment
<< Home