Thursday, November 16, 2006

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ!

ರಚನೆ - ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ||೨||
ದಾಟಿ ಬಂತು ಬೇಲಿ ಸಾಲ
ಮೀಟಿ ಹಳೆಯ ಮಧುರ ನೋವ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೋರೆ||೨||
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋ
ಎಲ್ಲಿ ಜಾರಿತೋ ಎಲ್ಲೆ ಮೀರಿತೋ ನಿಲ್ಲದಾಯಿತೋ....ಓ..

2 Comments:

Blogger Ganesha Lingadahalli ಹೇಳಿದ್ದು..

ಮನಸ್ಸು ಭಾವೋತ್ಕಟತೆಯನ್ನು ಹೊರಹಾಕುವಾಗ, ಮೊದಲು ಹುಡುಕುವುದೇ ಕವಿತೆಯನ್ನು....
ಬಟ್ಟಪ್ಪಾ.... ನಮ್ಮ ದತ್ತಸಂಚಯದ ಪಟ್ಟಿಗೆ ಭಾವಗೀತೆಗಳ ಸಂಗ್ರಹವನ್ನೂ ಸೇರಿಸೋಣವೇ?

November 27, 2006 12:32 PM  
Blogger ಸಿಂಧು sindhu ಹೇಳಿದ್ದು..

Jugaari Cross bagge.. :)

Nangondu sakkat aagi hodiyo laatri ticket kodamma....

ticket enadru ulta hodadre,, avatte ninge dinner ready... :D

Hey Harsha, nataka was superb... neevelru oLLe efforts haakideeri... Very nice to see you all like that...

Keep it up.. innu tumba naataka maadi.. stage mele matra.. :D

January 22, 2007 9:51 AM  

Post a Comment

<< Home