Tuesday, May 08, 2007

ನನ್ನ ಇನಿಯನ ನೆಲೆಯ

ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ. ಹೆಸರು ಕೇಳದವರೇ ವಿರಳ. ಅದರಲ್ಲೂ ಭಾವಗೀತೆಗಳನ್ನು ಆಸ್ವಾದಿಸುವವರಂತೂ ಇವರನ್ನು ಮರೆಯಲೇ ಸಾದ್ಯವಿಲ್ಲ.
ಇವರ ಒಂದು ಕವಿತೆ. ನನ್ನ ಅತೀ ಪ್ರೀಯವಾದ ಹಾಡುಗಳಲ್ಲಿ ಒಂದು. ಇಲ್ಲಿ ಪ್ರಕಟಿಸುತ್ತಿದ್ದೇನೆ.

ಸಂಗೀತ : ಸಿ. ಅಶ್ವಥ್
ಗಾಯನ : ಸಂಗೀತ ಕಟ್ಟಿ


ನನ್ನ ಇನಿಯನ ನೆಲೆಯ ಬಲ್ಲೆ ಏನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ

ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ ||೨||
ನನ್ನ ಮೊರೆಯನು ಏಕೆ ಕೇಳಲೊಲ್ಲ

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲ್ಲಿಸಬಲ್ಲ ||೨||
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆಬಿದ್ದು ತೆನೆಯೆದ್ದು ತೂಗುವವನು ||೨||
ನಲ್ಲೆ ಅಳಲನು ಏಕೆ ತಿಳಿಯನವನು


ಈ ಹಾಡನ್ನು ಇಲ್ಲಿ ಕೇಳಬಹುದು.

Friday, May 04, 2007

ಸೊಳ್ಳೆ ಕತೆ!!

ಮೊನ್ನೆ ಸಂದೀಪ ಕಳಿಸಿದ "ಮೋಟುಗೋಡೆ" ಯ ಬರಹಗಳನ್ನು ಓದುತ್ತಿದ್ದಾಗ ದೊಡ್ಡೇರಿ ಗಿರಿಭಟ್ಟನ ಜೋಕ್ ಒಂದು ನೆನಪಾಯಿತು. ಇದರಲ್ಲಿ ಯಾವುದೇ ಅಶ್ಲೀಲ ಶಬ್ದವಿಲ್ಲದಿದ್ದರೂ ಇದೊಂದು ವಯಸ್ಕರ ಜೊಕ್ ಅಂತ ಪರಿಗಣಿಸಬಹುದು.

ಇದು ಹೀಗಿದೆ..

ಇಬ್ಬರು ಅಪ್ರತಿಮ ಕತ್ತಿ ವೀರರು ಒಮ್ಮೆ ಭೇಟಿಯಾದಾಗ ಯಾರು ಉತ್ತಮರು ಅಂತ ವಾಗ್ವಾದ ನಡೆದು ಕೊನೆಗೆ ಇಬ್ಬರೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕೆಂದು ನಿರ್ಧಾರವಾಯ್ತು. ಸರಿ, ಅಲ್ಲೇ ಒಂದು ಸೊಳ್ಳೆ ಹಾರುತ್ತಿತ್ತು. ಮೊದಲನೆಯವನು ತನ್ನ ಕತ್ತಿಯನ್ನು ಬೀಸಿದ. ಸೊಳ್ಳೆ 2 ಭಾಗಗಳಾಗಿ ಬಿತ್ತು. ಈಗ ಇನ್ನೊಬ್ಬನ ಸರದಿ. ಅಲ್ಲೆ ಇದ್ದ ಇನ್ನೊಂದು ಸೊಳ್ಳೆಯನ್ನು ನೊಡಿ ಅವನು ತನ್ನ ಕತ್ತಿಯನ್ನು ಜೊರಾಗಿ ಬೀಸಿದ. ಅರೆ! ಏನೂ ಆಗಲಿಲ್ಲ. ಮೊದಲನೆಯವನು ನಗುತ್ತಾ ಕೇಳಿದ.

"ಇಷ್ಟೇನಾ ನಿನ್ನ ಸಾಮರ್ಥ್ಯ? ಆ ಸೊಳ್ಳೆಗೆ ಏನೂ ಆಗಲಿಲ್ಲ!!"

ಇನ್ನೊಬ್ಬನ ಉತ್ತರ - "ಯಾಕೆ ಏನೂ ಆಗಲಿಲ್ಲ ಅಂತ ಹೇಳ್ತೀಯ? ನೋಡು ಆ ಸೊಳ್ಳೆಗೆ ಇನ್ನು ಮಕ್ಕಳಾಗಲ್ಲ!!!"

Thursday, May 03, 2007

"ಮಧ್ಯ" ಪಾನ

ಅಪ್ಪಿ, ದಿವ್ಸಾ ಕುಡಿತ್ಯಡ ನೀನು ಹೌದನಾ?

ಇಲ್ಲೆ ಅಪ್ಪ, ದಿನ ಬಿಟ್ ದಿನ, ಮಧ್ಯ ಒಂದ್ ಒಂದ್ ದಿನ ಅಷ್ಟೇ!!

Wednesday, May 02, 2007

ಕೇಕ್ - ಕಾಗೆ- ಬರ್ತ್ ಡೇ

ಹೋದ ವರ್ಷ ನನ್ ರೂಮ್ ಮೇಟ್ ದು ಹುಟ್ಟಿದ ಹಬ್ಬದ ಸೆಲೆಬ್ರೇಷನ್ ಮಾಡ್ತಾ ಇರಕ್ಕರೆ ಬಂದ ವಿಚಾರ:

ಅಕಸ್ಮಾತ್ ಯಾರದ್ರೂ ಹುಟ್ಟಿದ ಹಬ್ಬದ ದಿವ್ಸನೇ ಸತ್ತು ಹೋದ್ರೆ ಹೆಂಗೆ ಸೆಲೆಬ್ರೇಟ್ ಮಾಡದು?

ಕೇಕ್ ತಂದು ಕಟ್ ಮಾಡಿ ಕಾಗೆಗೆ ಕೊಡದು!!