Friday, May 04, 2007

ಸೊಳ್ಳೆ ಕತೆ!!

ಮೊನ್ನೆ ಸಂದೀಪ ಕಳಿಸಿದ "ಮೋಟುಗೋಡೆ" ಯ ಬರಹಗಳನ್ನು ಓದುತ್ತಿದ್ದಾಗ ದೊಡ್ಡೇರಿ ಗಿರಿಭಟ್ಟನ ಜೋಕ್ ಒಂದು ನೆನಪಾಯಿತು. ಇದರಲ್ಲಿ ಯಾವುದೇ ಅಶ್ಲೀಲ ಶಬ್ದವಿಲ್ಲದಿದ್ದರೂ ಇದೊಂದು ವಯಸ್ಕರ ಜೊಕ್ ಅಂತ ಪರಿಗಣಿಸಬಹುದು.

ಇದು ಹೀಗಿದೆ..

ಇಬ್ಬರು ಅಪ್ರತಿಮ ಕತ್ತಿ ವೀರರು ಒಮ್ಮೆ ಭೇಟಿಯಾದಾಗ ಯಾರು ಉತ್ತಮರು ಅಂತ ವಾಗ್ವಾದ ನಡೆದು ಕೊನೆಗೆ ಇಬ್ಬರೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕೆಂದು ನಿರ್ಧಾರವಾಯ್ತು. ಸರಿ, ಅಲ್ಲೇ ಒಂದು ಸೊಳ್ಳೆ ಹಾರುತ್ತಿತ್ತು. ಮೊದಲನೆಯವನು ತನ್ನ ಕತ್ತಿಯನ್ನು ಬೀಸಿದ. ಸೊಳ್ಳೆ 2 ಭಾಗಗಳಾಗಿ ಬಿತ್ತು. ಈಗ ಇನ್ನೊಬ್ಬನ ಸರದಿ. ಅಲ್ಲೆ ಇದ್ದ ಇನ್ನೊಂದು ಸೊಳ್ಳೆಯನ್ನು ನೊಡಿ ಅವನು ತನ್ನ ಕತ್ತಿಯನ್ನು ಜೊರಾಗಿ ಬೀಸಿದ. ಅರೆ! ಏನೂ ಆಗಲಿಲ್ಲ. ಮೊದಲನೆಯವನು ನಗುತ್ತಾ ಕೇಳಿದ.

"ಇಷ್ಟೇನಾ ನಿನ್ನ ಸಾಮರ್ಥ್ಯ? ಆ ಸೊಳ್ಳೆಗೆ ಏನೂ ಆಗಲಿಲ್ಲ!!"

ಇನ್ನೊಬ್ಬನ ಉತ್ತರ - "ಯಾಕೆ ಏನೂ ಆಗಲಿಲ್ಲ ಅಂತ ಹೇಳ್ತೀಯ? ನೋಡು ಆ ಸೊಳ್ಳೆಗೆ ಇನ್ನು ಮಕ್ಕಳಾಗಲ್ಲ!!!"

5 Comments:

Blogger Sandeepa ಹೇಳಿದ್ದು..

ಹಹ್ಹಹ್ಹಹ್ಹಹ್ಹಾ!!! :D

ಗಿರಿಭಟ್ಟನ್ ಹತ್ರ ಇಂತ ಸುಮಾರು ಖಡ್ಗ ಇದ್ದು!!

May 04, 2007 2:31 PM  
Blogger Sushrutha Dodderi ಹೇಳಿದ್ದು..

ಹಹ್ಹಹ್ಹ! :D

ಈ ಜೋಕು ನಂಗೂ ಹೇಳಿತ್ತು ಗಿರಿಮಾಜಿ ಟ್ರಿಲ್ಲರ್ಸ್... :)

May 04, 2007 2:36 PM  
Blogger ಶ್ರೀಹರ್ಷ ನಡಹಳ್ಳಿ ಹೇಳಿದ್ದು..

@alpazna:

ಹೌದು ಭಟ್ಟಾ, ನೆನಪಾದಾಗೆಲ್ಲಾ ಒಂದ್ ಒಂದ್ ಹೊರಗೆ ತೆಗೆಯನ ಅಂತ!! :)

@shushrutha:

ಹೌದು. ಆದ್ರೂ ಅವ ಹೇಳಿದಷ್ಟು ಸೊಗಸಾಗಿ ಹೇಳಕ್ಕೆ ಬರದಿಲ್ಲೆ ನಮಗೆ!

May 04, 2007 4:19 PM  
Blogger Ragu Kattinakere ಹೇಳಿದ್ದು..

solle joku olle joku! Nenpiddu yange idu.....

November 22, 2007 10:25 PM  
Blogger ಮನಸ್ವಿ ಹೇಳಿದ್ದು..

ಹಹ್ಹಹಾ ಇಂತ ಜೋಕುಗಳ ಸರಮಾಲೆನೆ ಇದ್ದು ಗಿರಿ ಭಟ್ಟನ ಹತ್ರ

Aditya Bedur

June 27, 2008 11:01 PM  

Post a Comment

<< Home