ನನ್ನ ಇನಿಯನ ನೆಲೆಯ
ಇವರ ಒಂದು ಕವಿತೆ. ನನ್ನ ಅತೀ ಪ್ರೀಯವಾದ ಹಾಡುಗಳಲ್ಲಿ ಒಂದು. ಇಲ್ಲಿ ಪ್ರಕಟಿಸುತ್ತಿದ್ದೇನೆ.
ಸಂಗೀತ : ಸಿ. ಅಶ್ವಥ್
ಗಾಯನ : ಸಂಗೀತ ಕಟ್ಟಿ
ನನ್ನ ಇನಿಯನ ನೆಲೆಯ ಬಲ್ಲೆ ಏನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ
ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ ||೨||
ನನ್ನ ಮೊರೆಯನು ಏಕೆ ಕೇಳಲೊಲ್ಲ
ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲ್ಲಿಸಬಲ್ಲ ||೨||
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ
ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆಬಿದ್ದು ತೆನೆಯೆದ್ದು ತೂಗುವವನು ||೨||
ನಲ್ಲೆ ಅಳಲನು ಏಕೆ ತಿಳಿಯನವನು
ಈ ಹಾಡನ್ನು ಇಲ್ಲಿ ಕೇಳಬಹುದು.